ಪೀಟರ್ ಹೇಡನ್ ಡಿಂಕ್ಲೇಜ್ (ಜನನ ಜೂನ್ 11, 1969) ಒಬ್ಬ ಅಮೇರಿಕದ ನಟ. ಅವರು ಎಲ್ಫ್ (2003), ಫೈ೦ಡ್ ಮಿ ಗಿಲ್ಟಿ (2006), ಅಂಡರ್ಡಾಗ್ (2007), ಡೆತ್ ಅಟ್ ಎ ಫ್ಯೂನರಲ್ (2010) ಮತ್ತು ಐಸ್ ಏಜ್: ಕಾಂಟಿನೆಂಟಲ್ ಡ್ರಿಫ್ಟ್ (2012) ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ . ಇವರು ಗೇಮ್ ಆಫ್ ಥ್ರೋನ್ಸ್ ನಲ್ಲಿ ಟಿರಿಯನ್ ಲಾನ್ನಿಸ್ಟರ್ ಪಾತ್ರಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಎಮ್ಮಿ ಪ್ರಶಸ್ತಿಗಳಿಸಿದ್ದಾರೆ. == ಆರಂಭಿಕ ಜೀವನ == ಪೀಟರ್ ಹೇಡನ್ ಡಿಂಕ್ಲೇಜ್ ಜೂನ್ 11, 1969 ರಂದು ನ್ಯೂ ಜರ್ಸಿಯದ ಮೊರಿಸ್ಟೌನ್ನಲ್ಲಿ ಜನಿಸಿದರು. ಹುಟ್ಟುತ್ತಲೆ ಕುಬ್ಜತೆಗೆ ಕಾರಣವಾಗುವ ಅಹೊಂಡ್ರೊಪ್ಲಾಸಿಯಾ ಎ೦ಬ ಆನುವಂಶಿಕ ಅಸ್ವಸ್ಥತೆ ಹೊ೦ದಿದ್ದರು. 2005 ರಲ್ಲಿ ಅವರು ಎರಿಕಾ ಸ್ಮಿತ್ರನ್ನು ವಿವಾಹವಾದರು. ಅವರಿಗೆ ಒಬ್ಬ ಮಗಳಿದ್ದಾಳೆ. ಅವರು ಕ್ಯಾಥೊಲಿಕ್ . ಅವರು ಸಸ್ಯಾಹಾರಿ ಮತ್ತು ಪ್ರಾಣಿ ಹಕ್ಕುಗಳ ಬೆಂಬಲಿಗ ಮತ್ತು ಪ್ರತಿಪಾಲಕ. == ==